PIM Students Celebrate World Humanities Day

ತಾರೀಕು ಅಗೋಸ್ತು 24, 2018 ರಂದು ಉಡುಪಿಯ ಪೂರ್ಣಪ್ರಜ್ಞ ಮೆನೇಜುಮೆಂಟು ಸಂಸ್ಥೆಯಲ್ಲಿ ಜರಗಿದ ಮಾನವಿಕ ಸಂಸ್ಥೆಯ ಆಶ್ರಯದಲ್ಲಿ ಜರಗಿದ ಸಮಾರಂಭದಲ್ಲಿ ಉಡುಪಿಯ ಸಮಾಜಿಕ ಕಾರ್ಯಕರ್ತ ಶ್ರೀ ವಿಶು ಶೆಟ್ಟರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಸಂಸ್ಕøತಿ ಹಾಗೂ ವಿಧ್ಯೆ – ಇದರ ನಡುವೆ ಇರುವ ವತ್ಯಾಸಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.  ನಾನು ಕನ್ನಡದಲ್ಲಿಯೇ ಮಾತನಾಡುತ್ತೇನೆ. ಅವರು ತಮ್ಮ ಬಾಷಣವನ್ನು ಸ್ವಾತಂತ್ರ  ಸಿಕ್ಕಿದ ನಂತರ ನಮ್ಮ ದೇಶದಲ್ಲಿ ಆದ ಬದಲಾವಣೆಗಳಿಗೆ ಹೇಗ ನಮ್ಮ ವಿದ್ಯಾರ್ಥಿಗಳು ಹೇಗೆ ಸ್ಪಂದಿಸಬಹುದೆಂಬುದನ್ನು ವಿಷದವಾಗಿ ಹೇಳಿದರು. ಹೇಗೆ ಸ್ವಾತಂತ್ರ ಬಂದ ನಂತರ ನಮ್ಮ ವಿದ್ಯಾರ್ಥಿಗಳು ಸಂಸ್ಕøತಿಯನ್ನು ಪಡೆಯಲಿಲ್ಲ, ಕೇವಲ ವಿಧ್ಯೆ ಪಡೆದರೆ ಸಾಲದು, ಸಂಸ್ಕøತಿಯ ಅರಿವು ಅವರಿಗೆ ಯಾಕೆ ಬೇಕು ಎಂಬುದನ್ನು ಹೇಳಿದರು. ರಾಜಕೀಯ ಎಷ್ಟು ಹೊಲಸಾಗಿದೆ ಎಂದು ಹೇಳುತ್ತಾ, ಹೇಗೆ ಆತನ ಉದ್ದೇóಶ ಕೇವಲ ಹಣ ಸಂಪಾದನೆ ಮಾಡುವುದೇ ಇಂದಿನ ರಾಜಕೀಯ ವ್ಯಕ್ತಿಗಳ ಉದ್ದೇಶವಾಗಿದೆ ಎಂದು ಹೇಳಿದರಲ್ಲದೆ, ಇಂದು ಧರ್ಮ ಕೇವಲ ಬೂಟಾಟಿಕೆಯ, ಕೇವಲ ಸೋಗಲಾಡಿತನಕೆ ಸೀಮಿತವಾಗಿz, ಜನರ ದುಖ: ಪರಿಹಾರ ಮಾಡಲು ಉಪಯೋಗವಾಗುತ್ತಿಲ್ಲ. ಪ್ರತಿಯೊಂದು ಧರ್ಮದಲ್ಲಿಯೂ ಅತ್ಯಂತ ಒಳ್ಳೆಯ ವಿಚಾರಗಳಿವೆ. ಇದು ಬಡವರ ಕಣ್ಣೊರಸಲು, ಅವರ ಕಷ್ಟ ಕಾರ್ಪಣ್ಯವನ್ನು ದೂರ ಮಾಡಲು ಉಪಯೋಗವಾಗುತ್ತಿಲ್ಲವೆಂದು ವಿಷದವಾಗಿ ಹೇಳಿದರು. ಧರ್ಮ ರಾಜಕೀಯದೊಂದಿಗೆ ಸೇರಿದಾಗ, ಅದು ಕೋಮಗಲಭೆಯಾಗಿ ಮಾರ್ಪಾಡಾಗುತ್ತದೆ. ಆ ಕೋಮಗಲಭೆಯಿಂದ ಸಾವಿರಾರು ಜನರು ಸಾಯುತ್ತಿದ್ದಾರೆ. ದೇಶರಕ್ಷಣೆಗಾಗಿ ದೇಶದ ಗಡಿಯಲ್ಲಿ ಸಾಯುವ ಸಂಖ್ಯೆಗಿಂತ ಹೆಚ್ಚು ಜನರು ಇಂದು ಕೋಮಗಲಭೆಯಿಂದ ಸಾಯುತ್ತಿದ್ದಾರೆ. ಕೇವಲ ಸೀಮಿತ ರಾಜಕೀಯ ವ್ಯಕ್ತಿಗಳು ಮಾಡಿದ ತಪ್ಪಿನಿಂದ ನೂರ ಇಪ್ಪತ್ತು ಕೋಟಿ ಜನರು ಕಷ್ಟಪಡುವ ಅನಿರ್ವಾಯತೆ ನಮ್ಮ ದೇಶದಲ್ಲಿ ಉಂಟಾಗಿದೆ. ಇದನ್ನೆಲ್ಲ ನೋಡುವಾಗ, ನಾವು ಹೀಗೆ ಇರುವುದಾ? ಇದನ್ನು ಪ್ರತಿಭಟಿಸ ಬೇಡವಾ? ಆದರೆ ಇಂದು ಪ್ರತಿಭಟಿಸುವ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗಿದೆ. ಇದು ನ್ಯಾಯ, ಇದು ಅನ್ಯಾಯ, ನೀನು ಹೀಗೆ ಹೋಗಬೇಕು, ಇದು ನಿನ್ನ ದಾರಿ, ಹೀಗೆ ನಮ್ಮ ಯುವಜನಾಂಗಕ್ಕೆ ದಾರಿತೋರಿಸುವವರು ಇರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಎಷ್ಟೋ ಜನರ ಕಗ್ಗೊಲೆಯಾಗುತ್ತದೆ, ಆದರೆ ಸ್ವಲ್ಪ ಸಮಯದಲ್ಲಿ ಅದನ್ನು ಮರೆತುಬಿಡುತ್ತೇವೆ.

ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಇದ್ದೀರಿ, ನೀವೆಲ್ಲ 18 ವರ್ಷ ಮೀರದವರು, ನಿಮೆಗೆಲ್ಲ ತುಂಬ ಜವಾಬ್ದಾರಿ ಇದೆ, ನಿಮಗೆಲ್ಲ ಇಂದು ತುಂಬಾ ಜವಾಬ್ದಾರಿ ಇದೆ. ನೀವು ಮಾನವೀಯತೆಯನ್ನು ಖಂಡಿತ ಮರೆಯಬರದು. ನಿಮ್ಮ ವಿಧ್ಯೆ ಸಮಾಜಮೂಖಿಯಾಗಿರಬೇಕು. ನಾವು ಮಾಡುವ ಕೆಲಸ ಸಕಾರಾತ್ಮಕವಾಗಿರಬೇಕು, ಅದು ಮಾನವೀಯತೆಯಂದ ಒಡಗೂಡಿರಬೇಕು. ಇಂದು ಮಕ್ಕಳಿಗೆ ತಂದೆ ತಾಯಿ ಬೇಡ, ತಂದೆ ತಾಯಂದಿರಿಗೂ ಮಕ್ಕಳ ಮೇಲೆ ಪ್ರೀತಿ ಇರಬೇಕು. ಆದರೆ ಇಂದು ಮಕ್ಕಳಿದ್ದೂ ತಂದೆ ತಾಯಿ ಅನಾಥರಾಗಿದ್ದಾರೆ. ಇದಕ್ಕೆ ಸಂಬಂದಿಸಿದ ಹಲವಾರು ಉದಾಹರಣೆ ಮಾಡಿದರೆ ಸಾಕು. ದುರಂತರಗಳು ಯಾವುದೇ ರೀತಿಯಲ್ಲಿ ಬರಬಹುದು.


ಅಲ್ಲದೆ ನಮ್ಮ ಉಡುಪಿಯಲ್ಲಿಯೇ ಈ ವಿಷಮ ವೃತ್ತದಲ್ಲಿ ಒದ್ದಾಡುತ್ತಿರುವ ಹಲವಾರು ನಿದರ್ಶನಗಳಿವೆ. ಹೇಗೆ ಜೀವನ ಸಾಗಿಸಲು ಬೇರೆ ದಾರಿ ಇಲ್ಲದೆ ತನ್ನ ಶೀಲವನ್ನು ಮರಬೇಕಾದ ಅನಿರ್ವಾಯತೆಗೆ ಸಿಲುಕಬೇಕಾದ ಕೆಲವು ಕೇಸುಗಳು ಉಡುಪಿಯಲ್ಲಿಯೇ ಇದೆ. ಇದಕ್ಕೆಲ್ಲ ಯಾರು ಕಾರಣ? ನಮ್ಮ ಮಾನವೀಯತೆ ಎಲ್ಲಿ ಹೋಯಿತು? ಇದಕ್ಕೆಲ್ಲ ಯಾರು ಕಾರಣ? ಇಂದು ಪ್ರತಿಭಾವಂತರು ರಾಜಕೀಯಕ್ಕೆ ಬರಲಿಕ್ಕೆ ಆಗುತ್ತಾ ಇಲ್ಲ. ಕೆಟ್ಟ ವ್ಯಕ್ತಿಗಳು ಇಂದು ರಾಜಕೀಯ ಕ್ಷೇತ್ರದಲ್ಲಿ ವಿಜೃಂಭಿಸುತ್ತಿದ್ದಾರೆ. ಹಣ ಖರ್ಚು ಮಾಡುವುದು, ನಾಯಕನಾದಮೇಲೆ ಆ ಹಣವನ್ನು ಹೇಗೆ ಸಂಪಾದನೆ ಮಾಡುವುದು ಎಂಬುದೇ ಅವನ ಯೋಚನೆಯಾಗಿರುತ್ತದೆ. ಕೇವಲ ಬೆರಳೆಣಿಕೆಯಷ್ಟೆ ಉತ್ತಮ ರಾಜಕೀಯ ವ್ಯಕ್ತಿಗಳಿದ್ದಾರೆ.

ಶ್ರೀ ವಿಶು ಶೆಟ್ಟರು ವಿದ್ಯಾರ್ಥಿಗಳಿಗೆ ಮಾದಕದ್ರ್ಯವ್ಯಗಳ ಬಗೆಗೆ ಅರಿವು ಮೂಡಿಸುತ್ತಾ, “ಓಂದು ದಿನ ನನಗೆ ಒಬ್ಬ ಮಗಳ ತಂದೆ ಪೋನು ಮಾಡುತ್ತಾರೆ. ಇಂದು ನನ್ನ ಮಗಳು ಬರಲಿಲ್ಲ. ಟವರ್ ಲೊಕೇಶನ್ ಹೇಳುತ್ತದೆ – ಅವಳು ಮಣಿಪಾಲದಲ್ಲಿ ಇದ್ದಾಳೆ. ಮಣಿಪಾಲ ಇಡೀ ಹುಡುಕಿದರೂ ಅವಳು ಸಿಗಲಿಲ್ಲ. ಪೋಲೀಸ್ ಸ್ಟೇಷನ್‍ಗೆ ಹೋದಾಗ, ನಾಲ್ಕು ತಂಟೆಯ ತನಕ ಬರದೇ ಇದ್ದರೆ ಮಾತ್ರ ಕಂಪ್ಲ್ಯೆಂಟ್ ಕೊಡಿ, ಈಗ ಬೇಡ ಎಂದು ಹೇಳಿದರು. ಇದು ನಿಮ್ಮ ಒಳಿತಿಗಾಗಿ, ಎಂದು ಹೇಳಿದರು. ಅಷ್ಟು ಹೊತ್ತಿಗೆ ಹುಡುಗಿಯ ಮಿತ್ರರೊಬ್ಬರಿಂದ ಪೋನು ಬಂತು, ಹುಡುಗಿ ಯಾವ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದಾರೆ ಎಂದು, ಅಲ್ಲದೆ ಅದನ್ನು ನಾನು ನೋಡಿದ್ದೇನೆ. ಹುಡುಗಿಯ ತಂದೆ ಆ ವಿಷಯ ಕೇಳಿ ಬಹಳ ಬೇಸರ ಪಟ್ಟರು. ನಾವು ಕೇಳಿದ್ದೇವೆ, ಹುಡುಗರು ಮದ್ಯಪಾನ ಮಾಡುವುದನ್ನು, ಆದರೆ ಇಂದು ಹುಡುಗಿಯರು ಈ ಸ್ಥಿತಿಗೆ ಬರಲು ನಾವೇ ಕಾರಣ. ಈ ಬಗೆಗೆ ನಾವು ಯಾವರೀತಿಯ ಕ್ರಮ ಕೈಕೊಳ್ಳಬಹುದು?

ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ನೈತಿಕ ದಿವಾಳಿತನ ವ್ಯಕ್ತವಾಗುತ್ತದೆ. ಸತ್ತರೆ ಸಮೀಪದ ಬಂಧುಗಳು ಆತನ ಹೆಣವನ್ನು ತೆಗೆದುಕೊಂಡು ಹೋಗಲು ಹಿಂಜರಿಯುªದನ್ನು ನಾವು ನೋಡುತ್ತಿರುತ್ತೇವೆ. ಒಮ್ಮೆ ಒಬ್ಬ ಪೋಲೀಸ್ ಸಿಬಂಧಿ ಸತ್ತಿದ್ದ. ಆತನ ಕೇಸು, ಬ್ರೋಟ್ ಡೆತ್ತ್. ಆತ ಗಜೆಟಡ್ ಆಪೀ¸ರ್‍ನÀ ತಮ್ಮ ಎಂಬುದು ಆತನ ಕಿಸೆಯಲ್ಲಿ ಸಿಕ್ಕಿದ ದಾಖಲಾತಿಯಿಂದ ತಿಳಿದು ಬಂತು. ಕೂಡಲೇ ಆ ಗಜೆಟಡ್ ಆಪೀಸರನ ಮನೆಗೆ ಪೋನು ಮಾಡಿದರು. ಆತ ಏನು ಹೇಳಿದ ಗೊತ್ತೇ? ಆತ ನನ್ನ ತಮ್ಮ ಹೌದು, ಆದರೆ, ಆತನಿಗೂ ನನಗೂ ಈಗ ಯಾವುದೇ ಸಂಭಂಧವಿಲ್ಲ. ಆತನ ಹೆಣ ನಾನು ಕೊಂಡು ಹೋಗುವುದಿಲ್ಲ. ನನಗೆ ಈ ವಿಷಯದಲ್ಲಿ ಪೋನು ಮಡುವುದು ಬೇಡ. ನಂತರ ಪೋಲೀಸಿನವರು ನನಗೆ ಪೋನು ಮಾಡಿದರು. ಇದು ಸಹಜ ಸಾವಲ್ಲ. ಅಸಹಜ ಸಾವು, ಬ್ರೋಟ್ ಡೆತ್ತ್ ಅಂದರೆ ಅದು ಅಸಹಜ ಸಾವು. ಒಬ್ಬ ವ್ಯಕ್ತಿ ಈ ರೀತಿಯ ಸಾವಾದರೆ ಶವಪರೀಕ್ಷೆ ಆಗಬೇಕು. ಅಂತಹ ಪರಿಸ್ಥಿತಿಯಲ್ಲಿ ಆ ಶವದ ಸಂಪೂರ್ಣ ಹಕ್ಕು ಪೋಲೀಸಿನವರಿಗೆ ಇರುತ್ತದೆ. ಪೋಲೀಸಿನವರು ಮಹಜರು ನಡೆಸಿ ಅ ಕೇಸು ಕೊನೆಗೊಳಿಸಲು ಏನು ಮಾಡಬಹುದೆಂದು ವಿಚಾರಿಸಿದಾಗ, ನಾನು ಆ ಗಜೆಟಡ್ ಆಪೀಸರಿಗೆ ಪೋನು ಮಾಡಿದೆ, ಪುನ: ಆತನು ಅದೇ ವಿಷಯವನ್ನು ಹೇಳಿದ, ನನಗೆ ಆತನಿಗೆ ಈಗ ಯಾವುದೇ ಸಂಭಂದವಿಲ್ಲ, ನನ್ನ ತಮ್ಮ ಹೌದು. ನೀವು ಬಂದು ಹಾಗೇ ಬರೆದುಕೊಡಿ, ಎಂದು ಹೇಳಿದಾಗ, ಆತ ಬಂದು, ಈತನು ನನ್ನ ತಮ್ಮ, ನನಗೂ ಅತನಿಗೂ ಈಗ ಯಾವುದೇ ಸಂಬಂದವಿಲ್ಲ. ಆ ಶವವನ್ನು ನಾನು ಕೊಂಡು ಹೋಗಲು ನಿರಾಕರಿಸಿರುತ್ತೇನೆ. ನೀವು ಆ ಶವವನ್ನು ಏನು ಬೇಕಾದರೂ ಮಾಡಬಹುದು ಎಂದು ಮುಚ್ಚಳಿಕೆ ಬರೆದು ಕೊಟ್ಟರು. ಎಷ್ಟೋ ಅಧಿಕಾರಿಗಳು, ಪರತಿಭಾವಂತು, ಬಹಳಷ್ಟು ಸಂಬಳ ಪಡೆಯುವವರು, ಇದು ನ್ಯೆತಿಕ ದಿವಾಳಿ ಅಲ್ಲವ? ಇದು ಸರಿಯಾ? ಸಾಯುವ ಸಂದರ್ಭದಲ್ಲಿಯೂ ಸಮ್ಮಲ್ಲಿ ಸಂಭಂಧ ಇಲ್ಲವ ಮಕ್ಕಳೆ? ಆಲೋಚಿಸಿ.

ಅನ್ಯಾಯದ ವಿರುದ್ಧ ನಾವೆಷ್ಟು ಕೆಲಸ ಮಡಲಿಕ್ಕೆ ಆಗುತ್ತದೆ ಎಂಬುದನ್ನು ಆಲೋಚಿಸ ಬೇಕು. ಇದಕ್ಕೆ ಹೆದರಬೇಕಾಗಿಲ್ಲ. ಇಂದು ನಾವು ದಾನ ಮಾಡುತ್ತೇವೆ, ಯಾರಿಗೆ? ಅಯೋಗ್ಯರಿಗೆ ದಾನ ಮಡುತ್ತೇವೆ. ನಿಜವಾಗಿ ಅಸಾಹಯಕರಿಗೆ ದಾನ ಮಾಡಬೇಕು. ಕಲವೊಮ್ಮೆ, ನಾವು ನೂರು ರುಪಾಯಿ ದಾನ ಒಬ್ಬನಿಗೆ ಕೊಟ್ಟಾಗ ಆತ ಅದನ್ನು ಕುಡಿಯಲ್ಲಿಕ್ಕೆ ಉಪಯೋಗಿಸಿ, ದಾರಿಯಲ್ಲಿ ಬೀಳುತ್ತಾನೆ. ಯಾರು ಕಾರಣ, ನೀವಲ್ಲ, ಸರಕಾರ, ಕುಡಿಯಲು ಆತನಿಗೆ ಅನುಮತಿ ನೀಡಿದೆ, ಆತನಿಗೆ ಇಷ್ಟೇ ಕುಡಿ ಎಂದು ಹೇಳಲಿಲ್ಲ. ಅದಕ್ಕೆ ಕಾರಣ ನಮ್ಮ ಕಾನೂನು, ಆತ ಅರ್ಧ ಗಂಟೆ ಕುಡಿದ ಬಿಸಿಲಲ್ಲಿ ಬಿದ್ದರೆ ಸಾಯುವ ಸಂದರ್ಭ ಸಹ ಇದೆ. ಹೀಗೆ, ಮತ್ತೊಂದು ದಿನ, ಮಾರ್ಗದಲ್ಲಿ ಒಬ್ಬ ಬಿದ್ದಿದ್ದ, ಎಲ್ಲರೂ ಆತ ಕುಡಿದು ಬಿದ್ದಿದ್ದ ಎಂದು ಹೇಳುತ್ತಿದ್ದರು. ನನಗೆ ಯಾರೋ ಪೋನು ಮಾಡಿದರು, ಕೂಡಲೇ ಅಸ್ಪತ್ರೆಗೆ ಕರದು ಕೊಂದು ಹೋದಾಗ, ಆತನ ರಕ್ತದೊತ್ತಡ 330 ಆಗಿತ್ತು, ಇನ್ನು ಸ್ವಲ್ಪ ಹೆಚ್ಚು ಸಮಯ ಅಲ್ಲಿಯೇ ಬಿದ್ದಿದ್ದರೆ ದೇಹದ ಯಾವುದಾದರೂ ಭಾಗ ನಿಷ್ಕ್ರಿಯವಾಗುತ್ತಿತ್ತು. ಒಂದು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಮನೆಗೆ ಹೋದ. ಈಗಲೂ ಆರೋಗ್ಯದಿಂದ ಬಿಪಿ ಮಾತ್ರೆ ತೆಗೆದುಕೊಂಡು ಇದ್ದಾನೆ. ಆತನಿಗೆ ಕುಡಿತದ ಅಭ್ಯಾಸವಿರಲಿಲ್ಲ. ಆತನಿಗೆ ರಕ್ತದೊತ್ತಡ ಇದುವರೆಗೆ ಕಾಣಿಸಿರಲಿಲ್ಲವಂತೆ, ಅದೇ ಪ್ರಥಮ ಬಾರಿ ಕಾಣಿಸಿತ್ತು. ಆತನಿಗೆ ಸಹಾಯ ಮಾಡುವ ಅವಕಾಶ ನನಗೆ ಬಂದಿತ್ತು. ಆತ ನಾನು ಎದುರಾದಾಗಲೆಲ್ಲಾ ಕೃತಜ್ಞತೆಯಿಂದ ನನ್ನನ್ನು ನೋಡುತ್ತಿರುತ್ತಾನೆ. ವಿದ್ಯಾರ್ಥಿಗಳೆ, ಅನುಕಂಪ, ಸಹಾಯ ಮಾಡುವ ಮನಸ್ಸನ್ನು ಬೆಳಸಿಕೊಳ್ಳಿ.

ಸಾಯುವ ವ್ಯಕ್ತಿಯನ್ನು ಬದುಕಿಸುವ ಪ್ರಕ್ರಿಯಲ್ಲಿ ರಿಸ್ಕ್ ತೆಗೆದುಕೊಳ್ಳಬೇಡಿ. ಮೊನ್ನೆ ಒಬ್ಬ ಮಾನಸಿಕ ಸಮಸ್ಯೆಯಿಂದ ಬಳಳುತ್ತಿದ್ದ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಿದ್ದೆವು. ಆತನ್ನನ್ನು ಕರೆದುಕೊಂಡು ಹೋಗುವಾಗ ಆತನೊಂದಿಗೆ ಆಸ್ಪತ್ರೆಯ ನಿವೃತ್ತ ಸಿಬಂದಿ ರಂಗಪ್ಪ ಎಂಬವರಿಗೆ ಆ ವ್ಯಕ್ತಿ ಕಚ್ಚಿದ. ಕಚ್ಚಿದ ಕೂಡಲೇ ಆತನಿಗೆ ತುಂಬ ಟೆನ್ಶನ್ ಆಯಿತು. ಯಾಕೆಂದರೆ, ಆತ ರಸ್ತೆಬದಿಯಲ್ಲಿ ಜೀವಿಸುತ್ತಿದ್ದ. ಎಲ್ಲಿಯಾದರೂ ಆತ ಎಚ್ ಐ ವಿ ಪೊಸೆಟಿವ್ ಆಗಿದ್ದಲ್ಲಿ ಎಂಬ ಹೆದರಿಗೆ ಆಗುತ್ತಿತ್ತು. ಕೂಡಲೇ ಹೋಗಿ ಆತನನ್ನು ಪರೀಕ್ಷೆ ಮಾಡುವಾಗ ನೆಗೆಟಿವ್ ಆಗಿತ್ತು. ಅಲ್ಲದೆ ಅಪಘಾತ ಆದವರನ್ನು ತೆಗೆದುಕೊಂಡು ಹೋಗುವಾಗ ಈಗಾಗಲೇ ಆದ ಪೆಟ್ಟಿಗಿಂತಲೂ ಹೆಚ್ಚು ಪೆಟ್ಟು ಆಗುವ ಸಂದರ್ಭವಿರುತ್ತದೆ. ತಲೆಗೆ, ಎದೆಗೆ, ಬೆನ್ನು ಕೋಲಿಗೆ ಪಟ್ಟಾದಾಗ ತುಂಬ ಜಾಗರೂಕತೆ ಮಾಡಬೇಕಾಗುತ್ತದೆ. ಸೊಂಟಕ್ಕೆ, ಮೂಳೆಗೆ, ಕಾಲಿಗೆ ಪೆಟ್ಟಾಗಿದ್ದಾಗ ತುಂಬ ಸೆನ್ಸಿಟಿವ್ ಆಗಿ ಆ ವ್ಯಕ್ತಿಯನ್ನು ತೆಗೆದುಕೊಂಡು ಶೀಘ್ರವಾಗಿ ತೆಗೆದುಕೊಂಡು ಹೋಗಬೇಕು. ಸಿಮೆಂಟು ಶೀಟಿನಲ್ಲಿ ಸಣ್ಣ ಕ್ರಾಕ್ ಇದ್ದಾಗ, ಅದನ್ನು ಅಜಾರೂಗತೆಯಿಂದ ತೆಗೆದುಕೊಂಡು ಹೋದಲ್ಲಿ ಹೆಚ್ಚಿನ ಹಾನಿ ಸಂಭವಿಸುತ್ತದೆ. ಇಂದು ಹೆಚ್ಚಿನ ಹಾನಿ ವ್ಯಕ್ತಿಗಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಸಂಭವಿಸುತ್ತಿರುತ್ತದೆ. ಅಲ್ಲದೆ ಯಾವುದೇ ಅಸಾಹಯಕ ವ್ಯಕ್ತಿಯನ್ನು ತೆಗೆದುಕೊಂಡು ಹೋಗುವಾಗ ಆತನ ರಕ್ತ ನಮ್ಮ ಮ್ಯೆಗೆ ತಾಗದ ಹಾಗೆ ಜಾಗ್ರತೆ ವಹಿಸಿ. ನಾನು ಹ್ಯೆಸ್ಕೂಲಿಗೆ ಹೋಗುವಾಗ, ಸುಮಾರು ಮೂವತ್ತು ವರ್ಷದ ಹಿಂದೆ ಎಚ್. ಐ. ವಿ ಯ ಬಗೆಗೆ ಅರಿವಿರಲಿಲ್ಲ. ಸಮಸ್ಯೆಯೂ ಅಷ್ಟು ಭೀಕರವಾಗಿರಲಿಲ್ಲ. ರಕ್ತ ಮುಟ್ಟಿದರೆ ಅಮ್ಮ ಒಂದು ಪಾತ್ರ ತುಂಬ ಬಿಸಿನೀರು ಮಾಡಿಕೊಡುತ್ತಿದ್ದರು. ಅಷ್ಟೆ ಸಾಕಾಗುತ್ತಿತ್ತು. ಇಂದು ಅದು ಭೀಕರ ಸಮಸ್ಯೆ. ಆದ್ದರಿಂದ, ಮಕ್ಕಳೆ ರಕ್ತ ಒಂದು ಬಿಂದು ಸಹ ನಿಮ್ಮ ಶರೀರಕ್ಕೆ ಮುಟ್ಟದಂರೆ ಜಾಗ್ರತೆ ವಹಿಸಿ. ನಾವು ನಮ್ಮನ್ನು ಬದುಕಿಸಿಕೊಂಡು, ನಾವು ನಮ್ಮನ್ನು ಉಳಿಸಿಕೊಂಡು ಇನ್ನೊಬ್ಬರಿಗೆ ಸಹಾಯ ಮಾಡಬೇಕು.

ಇಂದು ಸಣ್ಣ ಕಾರಣಕ್ಕೆ ಜನರು ಆತ್ಮಹತ್ಯೆ ಮಾಡುತ್ತಿದ್ದಾರೆ. ನಿನ್ನೆ ನಾನು ಒಬ್ಬ ಮಾನಸಿಕ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆತನ ಮಾನಸಿಕ ಖಿನ್ನತೆಗೆ ಕಾರಣ, ಆತನಿಗೆ ಪ್ರಮೋಷನ್ ಕೊಟ್ಟಿರಲಿಲ್ಲ. ಆತನಿಗೆ ಎಲ್ಲಾ ರೀತಿಯಲ್ಲಿ ಅರ್ಹತೆ ಇತ್ತು. ಆತನಿಗೆ ಪ್ರಮೋಷನ್ ಕೊಡುವುದೆಂದು ಮೊದಲು ತೀರ್ಮಾನವಾಗಿತ್ತು. ಆದರೆ ಆ ನಿರ್ಧಾರವನ್ನು ಬದಲಾಯಿಸಿದ್ದರು. ಇದರಿಂದ ಆತ ಮಾನಸಿಕ ರೋಗಿಯಾಗಿ ಮಾರ್ಪಾಡಾಗಿದ್ದ. ಮಹಾನ್ ವ್ಯಕ್ತಿಗಳ ಜೀವನವನ್ನು ಅವಲೋಕಿಸಿ, ಅಬ್ದುಲ್ ಕಲಾಮ್, ಲಿಂಕನ್, ಹೀಗೆ ಮಹಾನ್ ವ್ಯಕ್ತಿಗಳ ಜೀವನವನ್ನು ನೋಡಿದಾಗ ಅಲ್ಲಿ ಸಹ ಸಮಸ್ಯೆಗಳಿತ್ತು, ಅವರು ಮಾನಸಿಕ ಖಿನ್ನತೆಗಳಿಗೆ ಒಳಗಾಗಲಿಲ್ಲ.

ಇಂದಿನ ಮಾದ್ಯಮಗಳು ಒಳ್ಳೆ ಕೆಲಸವನ್ನು ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣವನ್ನು ಒಳ್ಳೆ ಕೆಲಸಗಳಿಗೆ ಉಪಯೋಗಿಸಿ ಬೇಕು. ರಾತ್ರಿ ನೋಡಿದ ಬಾವಿಗೆ ಹಗಲು ಬೀಳಬೇಡಿ. ಹೀಗೆ ವಿದ್ಯಾರ್ಥಿಗಳಿಗೆ ಮನಮುಟ್ತುವಂತೆ ತಿಳಿ ಹೇಳಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರದ ನಿರ್ದೇಶಕರಾದ ಡಾ. ಭರತ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಸಾಮಾಜಿಕ ಬದ್ಧತೆಯನ್ನು ಹೊಂದುವುದರ ಜತೆಗೆ, ವಿಶ್ವ ಮಾನವತಾ ದಿನದ ಬಗೆಗೆ ಬೆಳಕು ಚೆಲ್ಲಿದರು. ಮಾನವೀಯತಾ ದಿನದಂದು, ನಾವು ವಿಶ್ವದ ಸಮಸ್ಯೆಗಳನ್ನು ದೂರಮಾಡುವಲ್ಲಿ ಹೋರಾಟ ನಡೆಸಿದ ವ್ಯಕ್ತಿಗಳನ್ನು ನೆನಪು ಮಾಡಿಕೊಳ್ಳುತ್ತೇವೆ.  He reiterated that to recognize the contributions of sacrifice of people for the cause of humanity, we celebrate World Humanities Day. “As 19th August fell on Sunday, we thought that is appropriate to celebrate today. Sri Vishu Shetty has been working towards human rights. Due to their own personal reasons, people are afraid of doing such services for the cause of humanity. Off course, all are having intentions to do such work, but lack of courage and will power prevent them. People like Mr. Shetty set models, appreciating him will impart such skills among our students. He also stressed the need for sympathy and empathy among our present generation. He hoped that HR Forum will take up many works of this nature, recognizing the deeds of such wonderful people. 


ಕಾರ್ಯಕ್ರಮದಲ್ಲಿ ಸಂಘದ ಅಧಿಕೃತ ಲಾಂಛನವನ್ನು ಬಿಡುಗಡೆಮಾಡಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ, ಸಂಸ್ಥೆಯ ಡೀನ್ ಆಗಿರುವ ಡಾ. ಸುರೇಶರಮಣ ಮಯ್ಯ ಮಾತನಾಡುತ್ತಾ, 
it is indeed a rare that people involve themselves for cause of humanities. It was on 19th 2003, 22 aid workers died in Bagdad among them Sergio Vieira de Mellow, the UN High Commissioner for Human Rights and the head of the UN mission in Iraq.
This World Humanitarian Day we continue to bring attention to the millions of civilians affected by armed conflict every day. The humanitarian concerns described here can’t possibly capture the lives of all those affected by conflict around the world. From people with disabilities, to the elderly, migrants, and journalists, all civilians caught in conflict need to be protected.
He appreciated the efforts of students and Faculty Coordinator to conceive this idea of felicitating Sri Vishu Shetty, who rescued hundreds of people who have been weak, incompetent, oppressed, in the verge of death, many sick people, who are likely to commit suicide and mentally retarded. He explained with many examples, fear of death, how he removed the fear of death, how he postponed the death of hundreds of people, how such knowledge may help our younger generations to cope up legal, medical and social issued in dealing with such people. Mere imparting of business education will not help us to overcome the future society, ethical values are also important, such programs will instill values of life among our younger generations, he said., 
 it is indeed a rare that people involve themselves for cause of humanities. It was on 19th 2003, 22 aid workers died in Bagdad among them Sergio Vieira de Mellow, the UN High Commissioner for Human Rights and the head of the UN mission in Iraq.
This World Humanitarian Day we continue to bring attention to the millions of civilians affected by armed conflict every day. The humanitarian concerns described here can’t possibly capture the lives of all those affected by conflict around the world. From people with disabilities, to the elderly, migrants, and journalists, all civilians caught in conflict need to be protected.
He appreciated the efforts of students and Faculty Coordinator to conceive this idea of felicitating Sri Vishu Shetty, who rescued hundreds of people who have been weak, incompetent, oppressed, in the verge of death, many sick people, who are likely to commit suicide and mentally retarded. He explained with many examples, fear of death, how he removed the fear of death, how he postponed the death of hundreds of people, how such knowledge may help our younger generations to cope up legal, medical and social issued in dealing with such people. Mere imparting of business education will not help us to overcome the future society, ethical values are also important, such programs will instill values of life among our younger generations, he said., 
The programme commenced with nice invocation rendering by Miss. Mahima and Miss Amrutha. Miss Shalini welcomed the participants while Miss Aadya Bhat proposed a vote of thanks. The whole programme was compered by Miss Varsha Sherigar. At the end, there was open dialogue with Mr. Vishu Shetty. Faculty member of the Institute Mr. Joe Ashwin Correra coordinated the programme. All the faculty members, students, non-teaching staff were present on this occasion.






























Comments

Popular posts from this blog

HALF DAY VISIT TO “MAMATHEYA THOTTILU”

Anti-Ragging Cell conducts a skit on the menace of Ragging

VISIT TO OZANAM-OLD AGE HOME AT KALLIANPUR, UDUPI.