ಪಿ.ಐ.ಎಮ್ ನಲ್ಲಿ ಯುವ ಸಪ್ತಾಹ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ


ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಫೆಬ್ರವರಿ 24 ರಿಂದ 28ರ ವರೆಗೆ ಜರಗಲಿರುವ ಯುವ ಸಪ್ತಾಹವನ್ನು ಆರ್‍ಟಿಒ ಅಧಿಕಾರಿ ಶ್ರೀಮತಿ ಎಂ. ಪಿ. ಓಂಕಾರೇಶ್ವರಿ ಅವರು ಉದ್ಘಾಟಿಸಿದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿನಿ ಕುಮಾರಿ ಸಿಂಚನಾ ಶೃಗೇರಿ ಅವರ ‘ಬಿಯಾಂಡ್ ದ ವೆಯಿಲ್ ಆಫ್ ಮೈಸೆಲ್ಫ್’ ಎಂಬ ಆಂಗ್ಲ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು ವ್ಯಕ್ತಿತ್ವ ವಿಕಸನದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ಯುವ ಸಪ್ತಾಹಗಳು ಪೂರಕವಾಗಿದ್ದು ಪ್ರತಿಯೊಂದು ಕಾಲೇಜುಗಳಲ್ಲಿಯೂ ಯುವ ಸಪ್ತಾಹದಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದ ಅಗತ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಅನುಭವ, ಪರಿಸರದ ಕುರಿತು ತಿಳುವಳಿಕೆ ಬೆಳೆಸಿಕೊಳ್ಳಬೇಕು ಎಂದು ಶ್ರೀಮತಿ ಎಂ. ಪಿ. ಓಂಕಾರೇಶ್ವರಿ ತಿಳಿಸಿದರು.

ಪಿ.ಐ.ಎಮ್. ನ ಗೌರವ ಪ್ರಾಧ್ಯಾಪಕ ಶ್ರೀ ವಸಂತ ರಾವ್ ಅವರ ಚಿತ್ರಕಲಾ ಪ್ರದರ್ಶನ ‘ವರ್ಣಾಬುಂಧಿ’ü ಯನ್ನು ಈ ಸಂದರ್ಭದಲ್ಲಿ ಉಡುಪಿಯ ಚಿತ್ರಕಲಾ ಮಂದಿರದ ಅಧ್ಯಕ್ಷರಾದ ಡಾ| ಯು.ಸಿ.ನಿರಂಜನ್ ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜಮೋಹನ್ ಅವರು ಮಾತನಾಡಿ, ಯೋಚನಾ ಶಕ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಅನಿವಾರ್ಯ ಎಂದರು.

ಪಿ.ಐ.ಎಮ್. ನ ನಿರ್ದೇಶಕರಾದ ಡಾ| ಎಂ. ಆರ್. ಹೆಗಡೆ ಯವರು ಈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳಾದ ಅಕ್ಷತಾ ಹಾಗೂ ಅರ್ಚನ ಪ್ರಾರ್ಥಿಸಿದರು. ಶ್ರೀ ಸಂತೋಷ ಪ್ರಭು ವಂದನಾರ್ಪಣೆಗೈದ ಈ ಕಾರ್ಯಕ್ರಮವನ್ನು ಕುಮಾರಿ ಮಾನಸ ರಾವ್ ನಿರ್ವಹಿಸಿದರು.

Comments

Popular posts from this blog

HALF DAY VISIT TO “MAMATHEYA THOTTILU”

Anti-Ragging Cell conducts a skit on the menace of Ragging

VISIT TO OZANAM-OLD AGE HOME AT KALLIANPUR, UDUPI.