ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆ0ಟ್ ನಲ್ಲಿ ವಿಶೇಷ ಉಪನ್ಯಾಸ

ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆ0ಟ್ ನಲ್ಲಿ ವಿಶೇಷ ಉಪನ್ಯಾಸ

ಉಡುಪಿ: ಉಡುಪಿಯ ಪೂರ್ಣಪ್ರಜ್ಞ  ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆ0ಟ್ ನಲ್ಲಿ ದಿನಾ0ಕ 28-07-2007 ರ0ದು “ಕಾಪೆರ್Çರೇಟ್ ವಿಷನ್ ಆಂಡ್ ವ್ಯಾಲ್ಯೂಸ್” ಎ0ಬ ವಿಚಾರದಲ್ಲಿ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಣಿಪಾಲ ಪ್ರೆಸ್ ಲಿಮಿಟೆಡ್‍ನ ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಪ್ರಭಂದಕರಾದ ಶ್ರೀ ಸುಬ್ರಹ್ಮಣ್ಯ ಆರ್. ಕೆ. ಅವರು ಇಂದಿನ ಉದ್ಯಮಗಳು ನಿರೀಕ್ಷಿಸುವ ವಿವಿಧ ಕೌಶಲಗಳು ಹಾಗೂ ಮಾನವೀಯ ಮೌಲ್ಯಗಳ ಕುರಿತು ಉತ್ತಮ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಅವರು ಈ ಸಂದರ್ಭದಲ್ಲಿ ‘ಉದ್ಯಮಗಳು ತಮ್ಮ ಉದ್ಧೇಶ ಹಾಗೂ ಮೌಲ್ಯ’ಗಳನ್ನು ನಿರ್ಧರಿಸುವ ವಿವಿಧ ಹಂತಗಳನ್ನು ಮನದಟ್ಟು ಮಾಡಿಕೊಡುವುದರ ಜೊತೆಗೆ ಎಂ.ಬಿ.ಎ. ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರಗಳ ಮೂಲಕ ಸಂವಹನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.
ಪಿ.ಐ.ಎಂ.ನ ನಿರ್ದೇಶಕ ಡಾ|ಎಂ.ಆರ್.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಎ. ವಿದ್ಯಾರ್ಥಿಗಳಾದ ಕುಮಾರಿ ರಂಜನ ಸ್ವಾಗತಿಸಿ, ಶ್ರೀ ಸೂರಜ್ ಕುಮಾರ್ ವಂದನಾರ್ಪಣೆಗೈದರು. ಕುಮಾರಿ ನೇಹಾ ಪೆಟಾನ್ಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು.



Comments

Popular posts from this blog

HALF DAY VISIT TO “MAMATHEYA THOTTILU”

Anti-Ragging Cell conducts a skit on the menace of Ragging

VISIT TO OZANAM-OLD AGE HOME AT KALLIANPUR, UDUPI.