ಪಿಐಮ್‍ನಲ್ಲಿ ಸ್ಥಾಪಕರ ದಿನಾಚರಣೆ
ಉಡುಪಿ : ಶ್ರೀ ಶ್ರೀ ವಿಬುಧೇಶ ತೀರ್ಥ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಪರಿಧಿಯಲ್ಲಿ ಬರುವಂತಹ 33 ಶೈಕ್ಷಣಿಕ ಸಂಸ್ಥೆಗಳಲ್ಲಿ ಜುಲೈ ತಿಂಗಳ ಪ್ರಥಮ ಗುರುವಾರವನ್ನು ಸ್ವಾಮೀಜಿಯವರ ಗೌರವಾರ್ಥ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಯ ಸ್ಮರಣಾರ್ಥವಾಗಿ “ಸ್ಥಾಪಕರ ದಿ£” ವನ್ನಾಗಿ ಆಚರಿಸಲಾಗುತ್ತದೆ. ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ದಿನಾಂಕ 05-07-2012 ರಂದು ಸಂಸ್ಥೆಯ ಪ್ರಜ್ಞಾ ಹಾಲ್‍ನಲ್ಲಿ“ಸ್ಥಾಪಕರ ದಿನಾಚರಣೆಯ” ಪ್ರಯುಕ್ತವಾಗಿ ಆಯೋಜಿಸಿದ ಈ ಕಾರ್ಯಕ್ರಮಕ್ಕೆ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಪಿ. ಆರ್. ಡಿ. ಪ್ರಬಂಧಕರೂ, ಸ್ವಾಮೀಜಿಯವರ ಪರಮಾಪ್ತರೂ ಆದ ಶ್ರೀ ಎಸ್. ಡಿ. ಪೆಜತ್ತಾಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸ್ವಾಮೀಜಿಯವರ ಜತೆಗಿನ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು ಹಿರಿಯ ಸ್ವಾಮೀಜಿಯವರು ಬಯಸಿದಂತಹ ಮೌಲ್ಯಯುತವಾದ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆದು ತಮ್ಮ ಜೀವನದಲ್ಲಿ ಜಯಶಾಲಿಗಳಾಗಬೇಕೆಂದು ಸಲಹೆ ಮಾಡಿದರು. ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರೂ ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿಯವರೂ ಆದ ಡಾ| ಜಿ. ಎಸ್. ಚಂದ್ರಶೇಖರ್ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಯನ್ನು ಹೊಂದಲು ಮಾರ್ಗದರ್ಶನ ಮಾಡಿದರು. ಸಂಸ್ಥೆಯ ನಿರ್ದೇಶಕರಾದ ಡಾ| ಎಂ. ಆರ್. ಹೆಗಡೆಯವರು ಪೂರ್ಣಪ್ರಜ್ಞ ಸಂಸ್ಥೆಗಳ ಸ್ಥಾಪನೆ ಮತು ಅಭಿವೃದ್ಧಿಯು ವಿಚಾರದಲ್ಲಿ ಸ್ವಾಮೀಜಿಯವರ ಮಹತ್ತರ ಸಾಧನೆಗಳನ್ನು ಹಾಗೂ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಅವರ ಕಾಳಜಿಗಳನ್ನು ಸ್ಮರಿಸಿದರು. ಸಂಸ್ಥೆಯ ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳಾದ ಪ್ಲಾವಿಯ ನಜರತ್, ಕಿರಣ ಕಾರಂತ್ ಮತ್ತು ಸೂರಜ್ ಭಟ್ ಈ ಕಾರ್ಯಕ್ರಮವನ್ನು ನಿರ್ವಹಿಸಿದರು.
ಪ್ರಾಧ್ಯಾಪಕರು, ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರೂ ಶ್ರೀ ಶ್ರೀ ಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಶೀರ್ವಾದ ಕೋರಿದರು.
Comments
Post a Comment
After verification, we will post it.