ಸಾಮಾಜಿಕ ಮಾಧ್ಯಮ ಮತ್ತು ಸಾಮಾಜಿಕ ಜಾಲಗಳ ಹಠಾತ್ ಹೆಚ್ಚಾದ ಬಳಕೆಯನ್ನು ಗವಿಮಾನವ ತತ್ವವು ವಿವರಿಸುತ್ತದೆ - ಶ್ರೀ ಸತೀಶ ಮಯ್ಯ
ನಾವೆಲ್ಲರೂ ಆದಿಮಾನವನು ಗುಹೆಗಳಲ್ಲಿ ವಾಸಿಸುತ್ತಿದ್ದ ಸಮಯದಿಂದಲೂ ಹೊಂದಿದ್ದ ಡಿ.ಎನ್.ಎ.ಯಿಂದಲೇ ವರ್ತಿಸುತ್ತಿದ್ದೇವೆ. ಪೇಪರ್ಲೆಸ್ ಕಛೇರಿಯ ಬಗ್ಗೆ ಮಾತನಾಡುತ್ತಲೇ ಮೊದಲಿಗಿಂತ ಹೆಚ್ಚು ಕಾಗದವನ್ನು ಉಪಯೋಸುತ್ತಿದ್ದೇವೆ. ವರ್ಚುವಲ್ ಕಾನ್ಪರೆನ್ಸ್‍ಗಳಿಂದ ಕಿಕ್ಕಿರಿದ ಸ್ಥಿತಿಯನ್ನು ತಡೆಯಬಹುದು ಎಂದುಕೊಂಡಷ್ಟೇ ಹೆಚ್ಚು ಟ್ರಾಫಿಕ್ ಜಾಮ್‍ಗಳು ಆಗುವುದನ್ನು ನೋಡಿದ್ದೇವೆ. ಇವೆಲ್ಲಾ ನಾವು ಇನ್ನೂ ಗುಹಾಮಾನವನ ಡಿ.ಎನ್.ಎ.ಯನ್ನು ಹೊಂದಿರುವುದನ್ನು ಸೂಚಿಸುತ್ತದೆ. ಜಾಹೀರಾತು ಕ್ಷೇತ್ರದಲ್ಲಿ ಹೆಸರು ಗಳಿಸಬೇಕೆಂದು ಬಯಸುವ ವ್ಯಕ್ತಿಯು ಈ ವಿಷಯವನ್ನು ಅರಿತುಕೊಂಡಿರಬೇಕು. ಗ್ರಾಹಕರೇ ಅತ್ಯಂತ ವಿಶ್ವಾಸಾರ್ಹ ಮಾಧ್ಯಮಗಳು. ಮಾಧ್ಯಮಗಳ ಬಗ್ಗೆ ಕೇಂದ್ರೀಕೃತ ಗಮನ ಹೊಂದಿದಾಗ ಮಾತ್ರ ಉತ್ತಮ ಮಾಧ್ಯಮಗಳ ಸೃಷ್ಠಿಯಾಗುತ್ತದೆ. ಜಾಹೀರಾತುಗಳನ್ನು ಪುನ:ಶ್ಚೇತನಗೊಳಿಸಿ ಜನರನ್ನು ರಂಜಿಸುವ ಅವಶ್ಯಕತೆ ಹಿಂದಿಗಿಂತ ಇಂದು ಹೆಚ್ಚಾಗಿದೆ. ಹೈಟೆಕ್ ಗಿಂತ ಹೈಟಚ್ ಅತ್ಯಂತ ಪರಿಣಾಮಕಾರಿಯಾದದ್ದು. ತಾಂತ್ರಿಕ ಪರಿಣತಿ ಹಾಗೂ ಜಾಹೀರಾತಿನ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಹೊಂದಿರುವುದಕ್ಕಿಂತಲೂ ವೈಯಕ್ತಿಕರಿಸಲಾದ ಭಾವನಾ ಪೂರ್ಣವಾದ ಜಾಹೀರಾತುಗಳೇ ಇಂದಿನ ಜಾಹೀರಾತು ಪ್ರಪಂಚದ ಆದ್ಯತೆಗಳಾಗಿವೆ. ಹಾಗಾಗಿ ಮನುಷ್ಯನ ವರ್ತನೆಯನ್ನು ಸೂಕ್ಷ್ಮವಾಗಿ, ಭಾವೋದ್ರಿಕ್ತರಾಗಿ ಹಾಗೂ ಕಲ್ಪನಾ ಕೇಂದ್ರಿತವಾಗಿ ಗಮನಿಸುವರೇ ಜಾಹೀರಾತು ಪ್ರಪಂಚದಲ್ಲಿ ಯಶಸ್ವಿಯಾಗುತ್ತಾರೆ ಎಂದು ಬಿ.ಪಿ.ಜಿ. ಮ್ಯಾಕ್ಸಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ನಹಣಾಧಿಕಾರಿಯಾದ ಶ್ರೀ ಸತೀಶ ಮಯ್ಯ ಅಭಿಪ್ರಾಯ ಪಟ್ಟರು.
ಅವರು ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ‘ಜಾಹೀರಾತು ಮತ್ತು ಮಾಧ್ಯಮ ಜಗತ್ತು - ಪ್ರಸ್ತುತ ದಿನದ ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾಪೆರ್Çೀರೇಟ್ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದ ಗ್ರಾಮೀಣ ಪ್ರತಿಭೆಯಾದ ಶ್ರೀ ಸತೀಶ ಮಯ್ಯರ ಸರಳತೆ, ಕೆಲಸದ ಮೇಲಿರುವ ಶ್ರದ್ಧೆ, ದೃಢತೆ ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಅನುಕರಣೀಯವಾದದ್ದು ಎಂದು ಪೂರ್ಣಪ್ರಜ್ಞ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಸಂಚಾಲಕರಾದ ಡಾ| ಕೃಷ್ಣ ಕೊತಾಯರು ಅಭಿಪ್ರಾಯಪಟ್ಟರು.
ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ ಕಾಪೆರ್Çೀರೇಟ್ ಸಂವಹನ ಅಧಿವೇಶನದಲ್ಲಿ ಇಲ್ಲಿನ ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಕಾಪೆರ್Çೀರೇಟ್ ಪ್ರಪಂಚದ ಉತ್ತಮ ತೆರೆತವನ್ನು ಒದಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಡಾ| ಭರತ್ ವಿ., ಅಭಿಪ್ರಾಯಪಟ್ಟರು. ಪಿ.ಐ.ಎಂ.ನ ಸಾಂಸ್ಥಿಕ ಸಂವಹನ ವೇದಿಕೆಯಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳಾದ ನಿಶಾಂತ್ ಡಿಸೋಜಾ, ಕುಮಾರಿ ಜೀeóÉಲ್ ಡಿಸೋಜಾ ಹಾಗೂ ಪ್ರಗತ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.

Comments
Post a Comment
After verification, we will post it.