One Day Workshop on Interview Technique by Dr. P. S. Yadapadithaya


Poornaprajna Institute of Management, Udupi organized a daylong workshop on ‘Interview Technique’ on 13th September, 2008. Dr. P. Subramanya Yadapadithaya, a renowned Professor and Chairmen, Board of Post Graduate Studies and Research in Commerce, Mangalore University delivered a Special Guest Lecture on the topic ‘Interview Technique’ and enlightened the students with practical tips on facing the interview.

PIM Director Dr. M. R. Hegde presided over the function. MBA Studenst Ms. Bhavana Rao welcomed the gathering. Mr. Adarsh Kumar proposed vote of thanks and Ms. Arpana Shetty conducted the programme.


After the Special Guest Lecture Session, Dr. P. S. Yadapadithaya and his esteemed team conducted Mock Interviews to all the 60 students of II year MBA Class. Apart from giving individual feedback to the students at the time of their interview, they organized a ‘Special Feedback Session’ at the end of the deliberations.

ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಒಂದು ದಿನದ ಕಾರ್ಯಾಗಾರ

ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ 13 ಸೆಪ್ಟೆಂಬರ್, 2008 ರಂದು “ಇಂಟರ್‍ವ್ಯೂ ಟೆಕ್ನಿಕ್” ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಖ್ಯಾತ ಪ್ರಾಧ್ಯಾಪಕರೂ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಅಧ್ಯಯನ ಸಮಿತಿಯ ಮುಖ್ಯಸ್ಥರೂ ಆದ ಡಾ| ಪಿ. ಎಸ್. ಯಡಪಡಿತ್ತಾಯ ರವರು “ಇಂಟರ್‍ವ್ಯೂ ಟೆಕ್ನಿಕ್” ನ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ವಿಶೇಷ ಉಪನ್ಯಾಸದ ನಂತರ ಡಾ| ಪಿ.ಎಸ್. ಯಡಪಡಿತ್ತಾಯ ಹಾಗೂ ಅವರ ಪ್ರತಿಭಾವಂತ ಬಳಗವು ದ್ವಿತೀಯ ಎಂ.ಬಿ.ಎ.ಯ ಎಲ್ಲಾ 60 ವಿದ್ಯಾರ್ಥಿಗಳಿಗೆ ‘ಸಂದರ್ಶನ ಕಾರ್ಯಾಗಾರ’ವನ್ನು ನಡೆಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತ್ಯೇಕವಾಗಿ ನಡೆಸಿದ ಸಂದರ್ಶನದ ವೇಳೆಯಲ್ಲಿ ವೈಯಕ್ತಿಕವಾಗಿ ಸಲಹೆ ಸೂಚನೆಗಳನ್ನು ನೀಡಿದ್ದಲ್ಲದೆ ಕಾರ್ಯಾಗರದ ಅಂತ್ಯದಲ್ಲಿ ವಿದ್ಯಾರ್ಥಿಗಳ ಸಮಾವೇಶ ನಡೆಸಿ, ಸಂದರ್ಶನ ಎದುರಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿಶೇಷ ಸೂಚನೆಗಳನ್ನು ನೀಡಿದರು.

ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ನ ನಿರ್ದೇಶಕರಾದ ಡಾ| ಎಂ. ಆರ್. ಹೆಗಡೆ ಯವರು ಈ ಕಾರ್ಯಾಗಾರದ ಕುರಿತಾಗಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಂ.ಬಿ.ಎ. ವಿದ್ಯಾರ್ಥಿಗಳಾದ ಕುಮಾರಿ ಭಾವನಾ ರಾವ್ ಸ್ವಾಗತಿಸಿ, ಆದರ್ಶ ಕುಮಾರ್ ಧನ್ಯವಾದ ಸಮರ್ಪಿಸಿದ ಈ ಕಾರ್ಯಕ್ರಮವನ್ನು ಕುಮಾರಿ ಅರ್ಪಣ ನಿರ್ವಹಿಸಿದರು.

Comments

Popular posts from this blog

VISIT TO OZANAM-OLD AGE HOME AT KALLIANPUR, UDUPI.

HALF DAY VISIT TO “MAMATHEYA THOTTILU”

Industrial Visit to Medium & Scale Industries of Udupi District 2019