ಪಿ.ಐ.ಎಮ್.ನ ಶ್ರೀ ಭರತ್ ವಿ. ಅವರಿಗೆ ಡಾಕ್ಟರೇಟ್
ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ಉಡುಪಿಯಲ್ಲಿ ಅಸಿಸ್ಟೆಂಟ್ ಪೆÇ್ರೀಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭರತ್ ವಿ. ಇವರು ಮುಂಬೈನ ಎಸ್.ಎಮ್. ಶೆಟ್ಟಿ ಕಾಲೇಜ್ ಆಪ್ ಸೈಯನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಇದರ ಪ್ರಾಂಶುಪಾಲರಾದ ಪೆÇ್ರೀಫೆಸರ್ ಡಾ. ಶ್ರೀಧರ ಶೆಟ್ಟಿ ಕೆ. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕೆಪಾಸಿಟಿ ಯುಟಿಲೈಝೇಶನ್ ಇನ್ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್” ಎಂಬ ಮಹಾಪ್ರಬಂಧಕ್ಕೆ ಸೇಲಂನ ವಿನಾಯಕ ಮಿಷನ್ಸ್ ಯುನಿವರ್ಸಿಟಿಯು ಡಾಕ್ಟರೇಟ್ ಪದವಿಯನ್ನು ನೀಡಿರುತ್ತದೆ. ಈ ಹಿಂದೆ ಇವರು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, ಉಡುಪಿ ಮತ್ತು ಇನ್‍ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ, ಬೆಂಗಳೂರು ಇಲ್ಲಿ ಒಟ್ಟು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.