ಉಡುಪಿ ಪಿ.ಐ.ಎಮ್ ನಲ್ಲಿ ಡಾ| ಎಮ್. ಗೋವಿಂದ ರಾವ್ ಅವರ ವಿಶೇಷ ಉಪನ್ಯಾಸ

ದಿನಾಂಕ 21-01-2010 ರಂದು “ಡಾ| ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್” ನ ವತಿಯಿಂದ ನಡೆಸಲ್ಪಡುವ ಉಪನ್ಯಾಸ ಮಾಲಿಕೆಯ ಪ್ರಥಮ ಉಪನ್ಯಾಸವು ‘ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ ನ ಪ್ರಜ್ಞಾ ಸಭಾಂಗಣದಲ್ಲಿ ನೆರವೇರಿತು.

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯರಲ್ಲಿ ಓರ್ವರಾದ ಹಾಗೂ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪೆÇೀಲಿಸಿ’, ನವದೆಹಲಿ ಇದರ ನಿರ್ದೇಶಕರೂ ಆಗಿರುವ ಡಾ| ಎಮ್. ಗೋವಿಂದ ರಾವ್ ಅವರು ‘ಅಂತರಾಷ್ರ್ಟೀಯ ಪರಿಧಿಯಲ್ಲಿ ಭಾರತದ ಆರ್ಥಿಕ ನೀತಿ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.

ಜಾಗತಿಕ ಆರ್ಥಿಕ ಪರಿಸ್ಠಿತಿಯ ಮೇಲೆ ಬೆಳಕನ್ನು ಚೆಲ್ಲುತ್ತಾ, ಆರ್ಥಿಕ ಹಿಂಜರಿತದ ಕಾರಣಗಳನ್ನು ವಿವರಿಸಿದರು ಹಾಗೂ ಭಾರತವು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಶಕ್ತವಾಗಿದೆ ಎಂದು ಡಾ| ಎಮ್. ಗೋವಿಂದ ರಾವ್ ಹೇಳಿದರು. ಅವರು ತಮ್ಮ ಉಪನ್ಯಾಸವನ್ನು ಮುಂದುವರಿಸುತ್ತಾ ಭಾರತದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಆಗದೆ ನಮ್ಮ ದೇಶ ‘ಪ್ರಬಲ ಜಾಗತಿಕ ಶಕ್ತಿ’ ಆಗಲು ಅಸಾಧ್ಯ ಎಂದರು. ಅವರು ತಮ್ಮ ಉಪನ್ಯಾಸವನ್ನು ಮುಂದುವರಿಸುತ್ತಾ ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಸಚಿವಾಲಯದ ದಿಟ್ಟ ನಿರ್ಧಾರ ಹಾಗೂ ಯೋಜನೆಗಳಿಂದ ಭಾರತವು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇಕಡಾ 7.9 ರಷ್ಟು ಹಾಗೂ ಮುಂಬರುವ ವರ್ಷಗಳಲ್ಲಿ ಶೇಕಡಾ 10 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿಯಿದ್ದ ಟ್ರಸ್ಟ್‍ನ ಚೇರ್ಮನ್‍ರಾದ ಪೆÇ್ರ| ಶ್ರೀಪತಿ ತಂತ್ರಿ ಯವರು ಡಾ| ಗುರುರಾಜ ಭಟ್ ರವರ ಸಾಧನೆಗಳನ್ನು ವಿವರಿಸುತ್ತಾ ಅವರ ಆದರ್ಶಗಳನ್ನು ಹೇಗೆ ಟ್ರಸ್ಟ್ ಸಮಾಜಕ್ಕೆ ತಲುಪಿಸುತ್ತಿದೆ ಎಂದು ಹೇಳಿದರು. ದಿವಂಗತ ಡಾ| ಗುರುರಾಜ ಭಟ್‍ರವರ ಧರ್ಮಪತ್ನಿ ಹಾಗೂ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ಭಟ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ನ ನಿರ್ದೇಶಕರಾದ ಡಾ| ಎಂ. ಆರ್. ಹೆಗಡೆ ಯವರು ವಹಿಸಿದ್ದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳಾದ ಕುಮಾರಿ ರೋಶನಿ ರೆನಿಟ ಬ್ರ್ಯಾಗ್ಸ್ ಸ್ವಾಗತಿಸಿ, ಕುಮಾರಿ ಸುಮನ್ ಅಮೀನ್ ವಂದನಾರ್ಪಣೆಗೈದ ಈ ಕಾರ್ಯಕ್ರಮವನ್ನು ಕುಮಾರಿ ದಿವ್ಯ ಪ್ರಭು ನಿರ್ವಹಿಸಿದರು.


A Special Guest Lecture by Dr. M. Govinda Rao at PIM, Udupi

On 21st January 2010, Dr Paduru Gururaja Bhat Memorial Trust organized the first lecture of Dr Paduru Gururaja Bhat memorial Lecture Series. The very first lecture was delivered by Dr. M. Govinda Rao who is the director of National Institute of Public Finance and Policy, New Delhi and the member of Economic Advisory Council to the Prime Minister. The programme was hosted by Poornaprajna Institute of Management, Udupi.

Dr M. Govinda Rao explained vividly the cause for liquidity crunch in India. He highlighted the challenges that India has to face/ is facing. He said that globalization has not been that bad for India. He highlighted on the various fiscal stimulus packages. He also suggested various measures by which fiscal deficit problem would be solved. He also expects India’s growth rate to accelerate to 7.5% in the present financial year, which may possibly reach 10% in the near future.

The Chairman of Dr. Paduru Gururaja Bhat Memorial Trust, Prof. P. Sripathi Tantri introduced the Trust and its activities and spoke about Dr. Gururaja Bhat and his inspirations. The wife of Dr. Paduru Gururaja Bhat and President of the Trust, Smt Parvathi Bhat also graced the occasion.

The Presidential remark was given by the Director of Poornaprajna Institute of Management Dr. M. R. Hegde. The Master of Ceremony was Ms. Divya Prabhu of II MBA while Ms. Roshni Braggs of II MBA welcomed the gathering and Ms Suman Amin proposed a vote of thanks.



Comments

Popular posts from this blog

VISIT TO OZANAM-OLD AGE HOME AT KALLIANPUR, UDUPI.

HALF DAY VISIT TO “MAMATHEYA THOTTILU”

Industrial Visit to Medium & Scale Industries of Udupi District 2019