Posts

Showing posts from January, 2010

ಉಡುಪಿ ಪಿ.ಐ.ಎಮ್ ನಲ್ಲಿ ಡಾ| ಎಮ್. ಗೋವಿಂದ ರಾವ್ ಅವರ ವಿಶೇಷ ಉಪನ್ಯಾಸ

ದಿನಾಂಕ 21-01-2010 ರಂದು “ಡಾ| ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್” ನ ವತಿಯಿಂದ ನಡೆಸಲ್ಪಡುವ ಉಪನ್ಯಾಸ ಮಾಲಿಕೆಯ ಪ್ರಥಮ ಉಪನ್ಯಾಸವು ‘ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ ನ ಪ್ರಜ್ಞಾ ಸಭಾಂಗಣದಲ್ಲಿ ನೆರವೇರಿತು. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯರಲ್ಲಿ ಓರ್ವರಾದ ಹಾಗೂ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪೆÇೀಲಿಸಿ’, ನವದೆಹಲಿ ಇದರ ನಿರ್ದೇಶಕರೂ ಆಗಿರುವ ಡಾ| ಎಮ್. ಗೋವಿಂದ ರಾವ್ ಅವರು ‘ಅಂತರಾಷ್ರ್ಟೀಯ ಪರಿಧಿಯಲ್ಲಿ ಭಾರತದ ಆರ್ಥಿಕ ನೀತಿ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ಜಾಗತಿಕ ಆರ್ಥಿಕ ಪರಿಸ್ಠಿತಿಯ ಮೇಲೆ ಬೆಳಕನ್ನು ಚೆಲ್ಲುತ್ತಾ, ಆರ್ಥಿಕ ಹಿಂಜರಿತದ ಕಾರಣಗಳನ್ನು ವಿವರಿಸಿದರು ಹಾಗೂ ಭಾರತವು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಶಕ್ತವಾಗಿದೆ ಎಂದು ಡಾ| ಎಮ್. ಗೋವಿಂದ ರಾವ್ ಹೇಳಿದರು. ಅವರು ತಮ್ಮ ಉಪನ್ಯಾಸವನ್ನು ಮುಂದುವರಿಸುತ್ತಾ ಭಾರತದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಆಗದೆ ನಮ್ಮ ದೇಶ ‘ಪ್ರಬಲ ಜಾಗತಿಕ ಶಕ್ತಿ’ ಆಗಲು ಅಸಾಧ್ಯ ಎಂದರು. ಅವರು ತಮ್ಮ ಉಪನ್ಯಾಸವನ್ನು ಮುಂದುವರಿಸುತ್ತಾ ರಿಸರ್ವ್ ಬ್ಯಾಂಕ್ ಹಾಗೂ ಹಣಕಾಸು ಸಚಿವಾಲಯದ ದಿಟ್ಟ ನಿರ್ಧಾರ ಹಾಗೂ ಯೋಜನೆಗಳಿಂದ ಭಾರತವು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇಕಡಾ 7.9 ರಷ್ಟು ಹಾಗೂ ಮುಂಬರುವ ವರ್ಷಗಳಲ್ಲಿ ಶೇಕಡಾ 10 ರಷ್ಟು ಆರ್ಥಿಕ ಅಭಿವೃದ್ಧಿ ದರವನ್ನು ದಾಖಲಿಸುವ ವಿಶ್ವಾಸ ವ...