ಸoತಾಪ
ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮ0ಡಳಿಯ ಅಧ್ಯಕ್ಷರು ಹಾಗು ಶ್ರೀ ಅದಮಾರು ಮಠದ ಹಿರಿಯ ಶ್ರೀಗಳೂ ಆದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಶ್ರೀ ಹರಿ ಪಾದದಲ್ಲಿ ಲೀನರಾದ ವಿಷಯ ತಿಳಿದು ಅತಿ ದು:ಖವಾಯಿತು. ಶ್ರೀಪಾದರು ಅಪ್ರತಿಮ ದೇಶಭಕ್ತರು. ಶಿಕ್ಷಣದಿ0ದ ಮಾತ್ರ ಭಾರತದ ಪ್ರಗತಿ ಸಾಧ್ಯ ಎ0ದು ಬಲವಾಗಿ ನ0ಬಿದವರು. ಸ್ವಾಮೀಜಿಯವರ ಅಗಲುವಿಕೆ ಶಿಕ್ಷಣ ಕ್ಷೇತ್ರಕ್ಕೆ ಹಾಗು ಸಮಾಜಕ್ಕೆ ತು0ಬಲಾರದ ನಷ್ಟ ತ0ದಿದೆ. ಶ್ರೀ ಹರಿಯ ಪಾದ ಸೇರಿಕೊ0ಡ ಶ್ರೀಪಾದರ ಸೇವೆಯನ್ನು ಸ್ಮರಿಸಿ ಪೂರ್ಣಪ್ರಜ್ಞ ಇನ್ಸಟ್ಯೂಟ್ ಆಫ್ ಮ್ಯಾನಜಮೇ0ಟನಲ್ಲಿ ಶ್ರದ್ದಾ0ಜಲಿ ಅರ್ಪಿಸಲಾಯಿತು ಹಾಗು ಸ್ವಾಮೀಜಿಯವರ ಗೌರವಾರ್ಥ ದಿನಾ0ಕ 15-09-2009 ರ0ದು ರಜೆ ಸಾರಲಾಯಿತು ಎ0ದು ಸ0ಸ್ಠೆಯ ನಿರ್ದೇಶಕರಾದ ಡಾ.ಎ0. ಆರ್.ಹೆಗ್ಡೆ ತಿಳಿಸಿದ್ದಾರೆ.
Comments
Post a Comment
After verification, we will post it.