Inauguration of Special Guest Lecture Series for the year 2008- 09 at PIM, Udupi


 The inaugural session of special guest lecture series for the year 2008-2009 was held at Poornaprajna Institute of Management, Udupi on 12th August 2008. The inauguration was done by the most eminent journalist of our nation Padmabhushana Dr. M. V. Kamath. Speaking on this occasion, Dr. M. V. Kamath emphasized to the students about having a clear conscience, to stick to commitments and to never give up the values in life which he considered the most valuable in any individual’s life. Dr. Kamath went on reminiscing and sharing his sweet memories of those proud freedom fighting days to the students and advised them not to lose values in life, though the world order changed around. He was firm in expressing that an individual should always ‘give’ to the society and not ‘expect’ from the society. Dr. Kamath’s presentation on the topic “Human Values in Life” was followed by an active interaction between him and the students of final year MBA Class.


The Director of the Institute Dr. M. R. Hegde presided over the function. MBA students Ms. Akshatha Bhat welcomed the gathering, Mr Santhosh Kumar proposed the vote of thanks and Ms. Akshatha S. Malpe compered the programme.

ಉಡುಪಿಯ ಪಿ.ಐ.ಎಮ್ ನಲ್ಲಿ 2008-09 ಸಾಲಿನ ವಿಶೇಷ ಉಪನ್ಯಾಸ ಮಾಲಿಕೆಯ ಉದ್ಘಾಟನೆ

ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ನಲ್ಲಿ ದಿನಾಂಕ 12-08-2008 ರಂದು ಪ್ರಸಾರ ಭಾರತಿಯ  ನಿವೃತ್ತ ಅಧ್ಯಕ್ಷರೂ, ಖ್ಯಾತ ಬರಹಗಾರರೂ ಆದ ಪದ್ಮಭೂಷಣ ಡಾ| ಎಂ. ವಿ. ಕಾಮತ್ ರವರು ವಿಶೇಷ ಆತಿಥಿ ಉಪನ್ಯಾಸ ಸರಣಿಯನ್ನು ಉದ್ಘಾಟಿಸಿದರು. ಅವರು ‘ಹ್ಯೂಮನ್ ವ್ಯಾಲ್ಯೂಸ್ ಇನ್ ಲೈಫ್’ ಎಂಬ ವಿಷಯದ ಮೂಲಕ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಕುರಿತು ಉತ್ತಮ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿಯೇ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ಸಾಧಿಸುವಲ್ಲಿ ನಿರಂತರ ಪ್ರಾಮಾಣಿಕ ಪ್ರಯತ್ನ  ಮಾಡಬೇಕಲ್ಲದೆ, ಪ್ರತಿ ಹಂತದಲ್ಲಿಯೂ ಮಾನವೀಯ ಮೌಲ್ಯಗಳನ್ನು ಅಗತ್ಯವಾಗಿ ಕಾಪಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಶ್ರುತಪಡಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿನ ತಮ್ಮ ನೆನಪುಗಳನ್ನು ಹಂಚಿಕೊಂಡ ಶ್ರೀಯುತ ಕಾಮತ್ ರವರು ಶ್ರೀ ಜೆ.ಆರ್.ಡಿ ಟಾಟಾ ರಂತಹ ಹಲವು ಉದ್ಯಮಿಗಳು ತಮ್ಮ ಜೀವನದಲ್ಲಿ ಕಾಪಾಡಿಕೊಂಡು ಬಂದ ಮಾನವೀಯ ಮೌಲ್ಯಗಳ ವಿಚಾರವಾಗಿ ವಿಸ್ತೃತ ವಿವರಣೆ ನೀಡಿದರು. ‘ಸಮಾಜ ನನಗೇನು ಕೊಟ್ಟಿದೆ’ ಎಂದು ಪ್ರಶ್ನಿಸದೇ, ‘ಸಮಾಜಕ್ಕೆ ನಾನೇನು ಕೊಟ್ಟಿದ್ದೇನೆ’ ಎಂದು ಪರಾಮರ್ಶಿಸಿಕೊಳ್ಳುವ ಭಾವನೆಯನ್ನು ಸದಾ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸುಮಾರು ಎರಡು ಗಂಟೆಗಳಿಗೂ ಹೆಚ್ಚಿನ ಕಾಲ ನಡೆದ ಈ ಸಮಾರಂಭದಲ್ಲಿ ಎಂ.ಬಿ.ಎ. ವಿದ್ಯಾರ್ಥಿಗಳೊಂದಿಗೆ ನಡೆದ ಪ್ರಶ್ನೋತ್ತರಗಳ ಸಂವಹನ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂದು ಡಾ| ಎಂ. ವಿ. ಕಾಮತ್ ರಿಂದ ಅಪೂರ್ವ ಮಾರ್ಗದರ್ಶನಗಳು ವಿದ್ಯಾರ್ಥಿಗಳಿಗೆ ದೊರೆಯುವಂತಾಯಿತು.

ಪಿ.ಐ.ಎಮ್. ನ ನಿರ್ದೇಶಕರಾದ ಡಾ| ಎಂ. ಆರ್. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿಗಳಾದ ಕುಮಾರಿ ಅಕ್ಷತಾ ಭಟ್ ಸ್ವಾಗತಿಸಿ, ಶ್ರೀ ಸಂತೋಷ ಕುಮಾರ್ ವಂದನಾರ್ಪಣೆಗೈದ ಈ ಕಾರ್ಯಕ್ರಮವನ್ನು ಕುಮಾರಿ ಅಕ್ಷತಾ ಎಸ್. ಮಲ್ಪೆ ನಿರ್ವಹಿಸಿದರು.

Comments

Popular posts from this blog

VISIT TO OZANAM-OLD AGE HOME AT KALLIANPUR, UDUPI.

HALF DAY VISIT TO “MAMATHEYA THOTTILU”

Industrial Visit to Medium & Scale Industries of Udupi District 2019