ಪಿ. ಐ. ಎಮ್. ನಲ್ಲಿ ಆರಂಭದ ವರ್ಷದಲ್ಲೆ ಶೇಕಡ 100 ರ ಫಲಿತಾಂಶ
ಉಡುಪಿ: 2006ರ ಜುಲೈ 1 ರಂದು ಕಾರ್ಯಾರಂಭ ಮಾಡಿದ ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಪಿ. ಐ. ಎಮ್.) ನ ವಿದ್ಯಾರ್ಥಿಗಳು 2006-07 ರ ವಷ್ರ್ಯಾಂತ್ಯದ ಎಮ್.ಬಿ.ಎ. ಪರೀಕ್ಷೆಯಲ್ಲಿ ಶೇಕಡಾ 100 ರ ಫಲಿತಾಂಶ ದಾಖಲಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್‍ನ ಆಶ್ರಯದಲ್ಲಿ ಪರಮಪೂಜ್ಯ ಶ್ರೀ ವಿಬುಧೇಶತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ 25 ನೇ ಶಿಕ್ಷಣ ಸಂಸ್ಥೆಯಾದ ಪಿ.ಐ.ಎಮ್. ನಲ್ಲಿ ವಿದ್ಯಾರ್ಥಿಗಳು ತಮ್ಮ ಪರಿಪೂರ್ಣ ವ್ಯಕ್ತಿತ್ವ ವಿಕಾಸದತ್ತ ಸಾಗುತ್ತಿದ್ದಾರೆ.
ಜಾಗತೀಕರಣ ಹಾಗು ಆರ್ಥಿಕ ಅಭಿವೃದ್ಧಿಯ ಈ ಕಾಲಘಟ್ಟದಲ್ಲಿ “ಆಡಳಿತ ನಿರ್ವಹಣೆ ಶಿಕ್ಷಣ” ದ ಮಹತ್ತ್ವ ಸಹಜವಾಗಿ ಹೆಚ್ಚುತ್ತಿದೆ. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ “ಮ್ಯಾನೇಜ್ಮೆಂಟ್ ಶಿಕ್ಷಣ” ಸಂಸ್ಥೆಗಳು ತಮ್ಮ ಗುಣಾತ್ಮಕ ಬೆಳವಣಿಗೆ ವಿಚಾರದಲ್ಲಿ ಎದುರಿಸುತ್ತಿರುವ ಪ್ರಮುಖ ಸವಾಲೆಂದರೆ ‘ಶಿಕ್ಷಣ ಹಾಗು ಕೈಗಾರಿಕೋದ್ಯಮಗಳ ನಡುವಿನ ಅಂತರ’. ಇಂತಹ ಅಂತರ ಹೋಗಲಾಡಿಸುವ ಸಲುವಾಗಿ ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‍ನಲ್ಲಿ ಶೈಕ್ಷಣಿಕ ಹಾಗು ಕೈಗಾರಿಕಾ ಸಂವಹನ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕೈಗಾರಿಕೋದ್ಯಮ ಹಾಗು ಶಿಕ್ಷಣ ತಜ್ಞರೊಂದಿಗೆ ವಿಚಾರ-ವಿನಿಮಯಗಳಿಗೆ, ಮತ್ತು ಜ್ಞಾನ ಹಾಗು ಕೌಶಲ ಗಳ ಅಭಿವೃದ್ಧಿಗೆ ನಿರಂತರ ಅವಕಾಶ ಕಲ್ಪಿಸಿಕೊಡಲಾಗಿದೆ.
ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ 5 ಗಂಟೆಗಳ ಪಾಠ ಪ್ರವಚನದ ನಂತರ, 2 ಗಂಟೆಗಳ ಅವಧಿಯನ್ನು ಶೈಕ್ಷಣಿಕ ಹಾಗೂ ಕೈಗಾರಿಕಾ ಸಂವಹನಕ್ಕಾಗಿ, ಮತ್ತು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಈ ಅವಧಿಯಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಕೌಶಲ್ಯ, ಕಮ್ಯೂನಿಕೇಶನ್ ಕೌಶಲ್ಯ ಹಾಗೂ ಸಾಫ್ಟ್ ಸ್ಕಿಲ್ಸ್ (ಜಿ.ಡಿ., ರೋಲ್ ಪ್ಲೇ ಗಳೇ ಮುಂತಾದ ಮ್ಯಾನೇಜ್ಮೆಂಟ್ ಕೌಶಲ್ಯ)ಗಳ ಸಮರ್ಪಕ ತರಬೇತಿ ನೀಡಲಾಗುತ್ತಿದೆ.
ಪರಮಪೂಜ್ಯ ಶ್ರೀಪಾದಂಗಳವರ ಪ್ರೇರಣೆ ಹಾಗೂ ಆಶೀರ್ವಾದ ಮತ್ತು ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಉಪನ್ಯಾಸಕರುಗಳ ಮಾರ್ಗದರ್ಶನದಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಗಳು ಉನ್ನತ ಶೈಕ್ಷಣಿಕ ಸಾಧನೆಯ ಜೊತೆಗೆ ಅಗತ್ಯ ಕೌಶಲಗಳನ್ನು ಸಂಪಾದಿಸುತ್ತ ಸಮರ್ಪಕ ಪಥದಲ್ಲಿ ಮುನ್ನಡೆಯುತ್ತಿದ್ದಾರೆ.
Comments
Post a Comment
After verification, we will post it.